RSS

Feb 14, 2010

ಬಾ ಬಾರೆ ಕಣ್ಮುಂದೆ

Hello Folks...


ಸದಾ ನನ್ನ ಸೃಷ್ಟಿಯಲ್ಲಿ ಇಂಗ್ಲಿಷ್ ಕಥೆಗಳು, ಕವಿತೆಗಳನ್ನ ಓದುತ್ತಿದ್ದ ನಿಮಗೆ..... ಈಗ ಪ್ರಪ್ರಥಮಬಾರಿಗೆ ಸಿಹಿಯಾದ ಸವಿಯಾದ ಕನ್ನಡದ ಕವಿತೆ.... ಹೌದು.... ಆಶ್ಚರ್ಯಚಕಿತರಾಗದಿರಿ !!!  ನಾನು ಕನ್ನಡವನ್ನು MURDER ಮಾಡುವಷ್ಟು ಕಲ್ಲು ಹೃದಯದವನಲ್ಲ.. ನಾನೂ ಕೂಡ ಕನ್ನಡ ಪ್ರೇಮಿ..

ಕನ್ನಡದಲ್ಲಿ ಕಥೆ, ಕವನ, ಕವಿತೆ ಎಂದರೇನೆ ಮನದಲ್ಲಿ ಒಂದು ಆನಂದ.. ಅದರಲ್ಲಿಯೂ ವರ್ಣನೆ ಮಾಡುತ್ತಿರುವುದು ಒಂದು ಹುಡುಗಿಯ ಬಗ್ಗೆ ಅಥವಾ ಪ್ರಿಯತಮೆಯ ಬಗ್ಗೆ ಎಂದರೆ ಮನದಲ್ಲಿ ಸಾವಿರ ಪಾತರಗಿತ್ತಿಗಳು (Butterfly) ಹಾರಿದಂತೆ ಒಂದು feeling...


ಹೌದು ರೀ... ಈಗ Valentine's Day ಸ್ಪೆಷಲ್ ರಿಲೀಸ್ ಅಂತ ನಿಮ್ಮ ಮುಂದೆ ಈ ಕವಿತೆಯನ್ನು ಸಾದರಪಡಿಸುತ್ತಿದ್ದೇನೆ... 6 ವರ್ಷದ ನಂತರ ಕನ್ನಡ ಕವಿತೆಗಳನ್ನು ಬರೆಯಲು ನನ್ನ ಲೇಖನಿಯನ್ನು ಮುಂದಿಟ್ಟಿದ್ದೇನೆ.... Hope u enjoy this...


ಬಾ ಬಾರೆ ಕಣ್ಮುಂದೆ


ನಡುರಾತ್ರಿಯಲಿ ನಡೆದೊ೦ಟಿ ಬರುತಿರುವಳು ಚೆಲುವೆ...
ಬರುವ ಭಂಗಿಯ ನೋಡಿ ಬೆರಗಾಗಿ ಮೈಮರೆವೆ,
ಕಾಲ್ಗೆಜ್ಜೆ ನಾದಕೇಳಿ ಮೈನಿಮಿರಿ ನಾನಿಂತೆ..
ಮೈಬಣ್ಣ ಕಂಡು ಕಣ್ ಮಂಜಾಗಿ ಮನಸೋತೆ...


ಮುಂಜಾನೆಯಲಿ ನೀ ಬರಲು ಚೆಲುವೆ ಹರಿಯುವನು ನೀರಾಗಿ ರವಿಯು
ಮುಸ್ಸಂಜೆಯಲಿ ನೀ ಬರಲು ಚೆಲುವೆ ನೋಡುವನು ಮೂಕಾಗಿ ಶಶಿಯು
ನೀ ನಡೆವ ಹಾದಿಯಲಿ ಮೊಗ್ಗು ಹೂವಾಗಿ ಅರಳುವವು ಒಂದೊಂದಾಗಿ
ನೀ ಬರುವ ದಾರಿಯಲಿ ಚಿತ್ತಾರದ ರಂಗೋಲಿ ಬೀಳುವವು ತಂತಾನಾಗಿ


ಬೆಳಗಾಗದು ನನಗೆ ನೋಡದಿದ್ದರೆ ಇವಳ ಮೊಗವ
ಇವಳ ಕಂಡಾಗ ಮರೆವೆ ನಲಿನಲಿಯುತ ಜಗವ
ಇವಳಾರೆಂದು ಅರಿವಾಯಿತೆ ನಿಮಗೆ...??
ಮರೆಯಲಾರದ ಸ್ವಪ್ನಸುಂದರಿ ನನಗೆ...


ನಿಶೆಯಲಿ ಬಂದಳು ಚೆಲುವೆ
ನಶೆ ಹೊತ್ತು ತಂದಳು ಚೆಲುವೆ
ನನ್ನ ಕಣ್ಣಿನ ಕಣ್ಮಣಿ ಯೇ ನೀ ಚೆಲುವೆ
ಬಾ ಬಾರೆ ಕಣ್ಮುಂದೆ ಎಂದೆಂದಿಗೂ ನೀ ನನ್ನವಳೇ..


************************************


My brush strokes on a Paper .... I call it "Angel Eyes"... It tells a lot many things when you keep observing it deeply... Belive me.. U'll forget to wink a second when you keep seeing them... She's Mine.. Mind U..!!
************************************

2 comments:

ssssssssssss said...

ಹರೀಶನ ಬ್ಲಾಗ್ ನಲ್ಲಿ ಕನ್ನಡ ಕವಿತೆಯನ್ನು ನೋಡಿ ತುಂಬಾ ಖುಷಿ ಆಯಿತು.. ಕವಿಯ ಮನಸಿನಲ್ಲಿರುವ ಸ್ವಪ್ನ ಸುಂದರಿಯ ಸೌಂದರ್ಯವು ಕವಿತೆಯಾಗಿ ಮೂಡಿದೆ.. ಪುಟ್ಟ ಹೃದಯದಲ್ಲಿ ಬಚ್ಚಿಟ್ಟುಕೊಂಡಿರುವ ಭಾವನೆಯ ಒಟ್ಟು ಸ್ವರೂಪವೇ ಈ ಕವಿತೆಯಾಗಿದೆ.. ಕವಿತೆಯ ಜೊತೆಗೆ ಕುಂಚದಲ್ಲಿ ಅರಳಿದ ಚಿತ್ರವೂ ಸುಂದರವಾಗಿದೆ.. ಇದೆಲ್ಲದರ ಜೊತೆಗೆ ಕವಿಗೆ ಸ್ಪೂರ್ತಿಯಾಗಿರುವ ಆ ಸುಂದರಿಯ ಹೆಸರೇನೆಂದು ತಿಳಿಯುವ ಕುತೂಹಲ ಹೆಚ್ಚಾಗಿದೆ :)

Suhasini said...

I was pretty impressed with your poem to a stage where I am wondering who that special girl is?
Flow and usage of words seems nice. Didnt know you could write in kannada so well...

Post a Comment